Thursday, 17 September 2020

ಪುಸ್ತಕ ಪರಿಚಯ (Book Introduction) - 30



ಗ್ರಂಥ - 30: ಭಕ್ತ ಭಾವಧಾರೆ -೬:  ಮಹಾಮಹಿಮ ಶ್ರೀರಂಗ ಗುರುಭಗವಂತ (Bhakta Bhaavadhare-6:Mahamahima Sriranga Gurubhagavantha)

ಪುಸ್ತಕ ಪರಿಚಯ (Book Introduction) :

ಲೇಖಕರು : ಶ್ರೀ ಶ್ರೀ ರಂಗಪ್ರಿಯ ಶ್ರೀ ಶ್ರೀ:   
ಪ್ರಕಾಶಕರು : ಅಷ್ಟಾಂಗಯೋಗ ವಿಜ್ಞಾನ ಮಂದಿರ, ಬೆಂಗಳೂರು

ಶ್ರೀ ಗುರುಗಳ ಹುಟ್ಟೂರಿನಲ್ಲೇ ಜನ್ಮ ತಳೆದು ತಮ್ಮ ಬಾಲ್ಯದಿಂದಲೂ ಮಹಾಗುರುಗಳ  ಸಾನ್ನಿಧ್ಯ ಸೌಖ್ಯಗಳನ್ನು ಅನುಭವಿಸಿದ, "ಶ್ರೀರಂಗಮಹಾಗುರು" ಎಂಬ ಮಹಾತ್ಮರಿಗೆ  ಪ್ರಿಯರೆನಿಸಿದ "ವರದ ದೇಶಿಕಾಚಾರ್ಯ ರಂಗಪ್ರಿಯ"ರು   ತಮ್ಮ ಗುರುಗಳಿಗೆ ಭಾವ ಸಮರ್ಪಣೆ ಸಲ್ಲಿಸಿದ ಮೇರು ಕಾಣಿಕೆಯ ಶ್ರೀ ಕೋಶ  "ಯೋಗೈಶ್ವರ್ಯ ಸಂಪನ್ನ -ಕಾರುಣ್ಯ ಪರಿಪೂರ್ಣ ಮಹಾಮಹಿಮ ಶ್ರೀರಂಗ ಗುರುಭಗವಂತ "  ನಾಮಾಂಕಿತ  ಭಕ್ತಭಾವಧಾರೆ -6 ಎಂಬ ಈ ಪುಸ್ತಕ .

ಈ ಜ್ಞಾನಮಧುಕೋಶವು ಗುರುಗಳ ಪರಮಾದರ್ಶ ಜೀವನದ ವಿವಿಧ ಮುಖಗಳನ್ನು ಕುರಿತು ಆಗಾಗ ಶಿಷ್ಯೋತ್ತಮರಾದ ಶ್ರೀರಂಗಪ್ರಿಯರು ಬಣ್ಣಿಸಿದ ಪ್ರವಚನಗಳ ಸಂಕಲನವಾಗಿದೆ. ತಮ್ಮ ಬಾಲ್ಯಕಾಲದಿಂದ ಇದ್ದ ಶ್ರೀ ಗುರುವಿನ ಪರಿಚಯದೊಂದಿಗೆ ಆರಂಭವಾಗಿ ಗುರುವು ಹೇಗೆ ಆಚಾರ್ಯ ಪುರುಷನಾಗಿದ್ದ, ಆರ್ಷ ಭಾರತೀಯ ವಿವಿಧ ವಿದ್ಯೆಗಳ ಬಗ್ಗೆ ಗುರುವಿನ ಅನ್ಯಾದೃಶವಾದ ನೋಟ, ವೇದಗಳ ಬಗ್ಗೆ ಗುರುವಿತ್ತ ವೈಜ್ಞಾನಿಕ ಹಿನ್ನೆಲೆ, ಶ್ರೀ ಗುರುವಿನ ಯೋಗ ವೈಭವಗಳು, ಶ್ರೀ ಗುರುವಿನ ವಾತ್ಸಲ್ಯಾದಿ ಆತ್ಮಗುಣಗಳು- ಇವುಗಳ ಪರಿಚಯವನ್ನು ಮಾಡಿಸುತ್ತಾ, ಗುರುವಿನ ಅವತಾರ ವೈಭವದ ಚಿತ್ರಣದೊಂದಿಗೆ ಪುಸ್ತಕವು ಮಂಗಲವನ್ನು ಕಾಣುತ್ತದೆ.

ಸಹೃದಯ ಓದುಗರ ಮನೋಬುದ್ಧಿಗಳಲ್ಲಿ ಶ್ರೇಷ್ಟ ಗುರುಗಳ ಸತ್ಯವೂ ಭವ್ಯವೂ ಆನಂದಭರಿತವೂ ಆದ ಸ್ವರೂಪವನ್ನು ಈ ಲೇಖನ ಮಾಲೆಯು ಅಚ್ಚೊತ್ತುವುದಲ್ಲದೆ ಒಂದು ಆದರ್ಶ ಜೀವನದ ಸಮಗ್ರ ಚಿತ್ರಣವನ್ನು ಮೂಡಿಸುತ್ತದೆ. ಗುರುವಿನ ಬಗ್ಗೆ ಭಾವಿಸುವ ಮನುಜರಿಗೆ ದಾರಿದೀಪವಾಗಿದೆ.

ಬೆಲೆ: ರೂ. ೧೫೦/- (Hardbound )   
ನಮ್ಮ ವೆಬ್ ಸೈಟ್ (https://ayvm.in/publications) ನಲ್ಲಿ ಖರೀದಿಸಿದರೆ ಉಚಿತ ಮನೆಗೆ ವಿತರಣೆ (ವಿಶಾಲ ಭಾರತದಲ್ಲಿ ಮಾತ್ರ). 
mob: 8050124365 
whatsapp: 7411960041


To know more about Astanga Yoga Vijnana Mandiram (AYVM) and for ordering the books please visit our Website, Facebook and Twitter pages

More about AYVM

To know more about Astanga Yoga Vijnana Mandiram (AYVM) and for ordering the books please visit our Official Website, Facebook and Twitter pages: