Tuesday, 29 September 2020

ಪುಸ್ತಕ ಪರಿಚಯ (Book Introduction) - 32



ಗ್ರಂಥ - 32: ಶ್ರೀರಂಗವಚನಾಮೃತ (ಭಾಗ 1-4) (Srirangavachanamrutha (1-4): Compilation)

ಪುಸ್ತಕ ಪರಿಚಯ (Book Introduction) :

ಪ್ರಕಾಶಕರು : ಅಷ್ಟಾಂಗಯೋಗ ವಿಜ್ಞಾನ ಮಂದಿರ, ಬೆಂಗಳೂರು

ಶ್ರೀರಂಗವಚನಾಮೃತ (ಭಾಗ 1-4) ಪುಸ್ತಕ ಪರಿಚಯವನ್ನು ಸಂಕ್ಷಿಪ್ತವಾಗಿ ನೋಡೋಣ.  ಜೀವನದಲ್ಲಿ ಸುಖ ಪಡೆದು ಆನಂದಿಸಬೇಕೆಂದು ಮಾನವರೆಲ್ಲರಿಗೂ ಸಹಜವಾಗಿ ಮೂಡಿಬರುವ ಭಾವನೆಗಳು. ಇಂದ್ರಿಯಸುಖ – ಆತ್ಮಸುಖಗಳೆರಡರ ಸ್ವರೂಪವನ್ನು ಅರಿತ ಭಾರತ   ಮಹರ್ಷಿಗಳು ಪರಮಕರುಣೆಯಿಂದ ಶಾಶ್ವತವಾದ ಆನಂದ ಧಾಮಕ್ಕೆ ಒಯ್ಯುವ ಸಂಸ್ಕೃತಿ ನಾಗರೀಕತೆಗಳನ್ನು ರೂಪಿಸಿ ಕೊಟ್ಟಿರುವರು. ಕಾಲವು ಕಳೆದಂತೆ ಅವುಗಳು ಮೂಢನಂಬಿಕೆಗಳ ಬಿರುದನ್ನು ಪಡೆದು ಮೂಲೆಗೆ ಸೇರಿವೆ. ಇಂತಹ ಸನ್ನಿವೇಶದಲ್ಲಿ ಶ್ರೀರಂಗಮಹಾಗುರುಗಳೆಂಬ ಮಹಾಯೋಗಿವರೇಣ್ಯರು ಅವತರಿಸಿ ಭಾರತೀಯ ಸಂಸ್ಕೃತಿ ನಾಗರೀಕತೆಗಳ ಜೀವಾಳವನ್ನು ತೋರಿದರು. ಅವರು ಎಲೆಮರೆಯಕಾಯಿಯಂತೆ ಇದ್ದವರು. ಅವರು ತಮ್ಮ ಶಿಷ್ಯರಿಗೆ ದಯಪಾಲಿಸಿರುವ ಮಾತುಗಳೂ ಹಾಗೂ ಪ್ರವಚನಗಳು ಅತ್ಯಮೂಲ್ಯವಾಗಿವೆ. ಆ ಪ್ರವಚನ ಸಾಗರಗಳಲ್ಲಿ ಕೆಲವು   ನುಡಿಮುತ್ತುಗಳನ್ನು ಸಂಗ್ರಹಿಸಿ ಮುದ್ರಣಕ್ಕಾಗಿ ಸಿದ್ಧಪಡಿಸಿದವರು ಶ್ರೀ ಶ್ರೀ ರಂಗಪ್ರಿಯ ಸ್ವಾಮಿಗಳು ಮತ್ತು ದಿ. ವಿದ್ವಾನ್ ಛಾಯಾಪತಿಗಳು. ಈ ಪುಸ್ತಕವು ನಾಲ್ಕು ಭಾಗಗಳನ್ನು ಹೊಂದಿದೆ-  

ಈ ನಾಲ್ಕು ಭಾಗಗಳಲ್ಲಿರುವ ಭೂಮಿಕೆಗಳಲ್ಲಿಯೇ ವಿಷಯಗಳ ವಿಹಂಗಮ ನೋಟವನ್ನು ಕಾಣಬಹುದು. ಮೊದಲನೆಯ ಭಾಗವು " ಜೀವನ"ಎಂಬ ಶೀರ್ಷಿಕೆಯನ್ನು ಹೊಂದಿದೆ.ಜೀವನದ ಧ್ಯೇಯವೇನು? ಅದನ್ನು ಸಾಧಿಸುವ ಬಗೆ ಎಂತು? ಪುರುಷಾರ್ಥಗಳನ್ನು ಪಡೆದು ಪೂರ್ಣ ಜೀವನ ನಡೆಸುವುದು ಹೇಗೆ? ನಿಜಕ್ಕೂ ಆಚಾರದ ಮೌಲಿಕವಾದ ಅರ್ಥವೇನು? ಆದರ್ಶ ಜೀವನವನ್ನು ನಡೆಸುವ ಗೃಹಿಣೀ-ಗೃಹಸ್ಥರು ಹೇಗಿರಬೇಕು? ಜೀವನದ ಮೂಲದ ಅರಿವನ್ನು ಕೊಡುವಲ್ಲಿ ಗುರುವಿನ ಪಾತ್ರವೇನು? ಮುಂತಾದ ಉದ್ಬೋಧಕ ವಿಷಯಗಳಿವೆ. "ಬೆಂಕಿ ಕಡ್ಡಿಯು ದ್ದನ್ನಿಟ್ಟುಕೊಂಡಿರುವುದರಿಂದ ಅದಕ್ಕೆ ಮಹಿಮೆ. ಬರೀ ಕಡ್ಡಿಗಳಿಗಲ್ಲ. ಗುರು ಎನ್ನುವುದು ವ್ಯಕ್ತಿಗಲ್ಲ; ಶಕ್ತಿಗೆ. ಆ ಮಹಿಮೆ ವ್ಯಕ್ತವಾಗಲು, ಸೇರುವೆ ಬೇಕು. ಗುರು-ಶಿಷ್ಯ-ಭಗವಂತ ಇವುಗಳ ಯೋಗ ನಡೆದರೆ ಆ ಮಹಿಮೆಯ ಅರಿವಾಗುತ್ತದೆ" ಎಂದು ಆರಂಭದಲ್ಲೇ ಗುರುವಿನ ಬಗ್ಗೆ ಹೇಳಿರುವ ಮಾತು ನಿಜವಾದ ಗುರುವಿನ ಪರಿಚಯವನ್ನು ನಮಗೆ ಕೊಡುತ್ತದೆ. ಮಹರ್ಷಿ ಭಾರತಕ್ಕೆ ನಮಿಸುತ್ತಾ ಆರಂಭವಾಗುವ  

ಎರಡನೆಯ ಭಾಗವಾದ  "ಭಾರತ- ಸಂಸ್ಕೃತಿ-ನಾಗರಿಕತೆ" ಎಂಬ ಶೀರ್ಷಿಕೆಯನ್ನು ಹೊಂದಿದ್ದು,  ಭಾರತದ ವೈಶಿಷ್ಟ್ಯ, ಇಲ್ಲಿನ ಸಂಸ್ಕೃತಿ ನಾಗರಿಕತೆಗಳ ಹಿರಿಮೆ , ಇಲ್ಲಿನ ದೇವಾಲಯ ತೀರ್ಥಕ್ಷೇತ್ರಗಳನ್ನು ಯಾವ ಕಣ್ಣಿನಿಂದ ನೋಡಬೇಕು, ನಿಜಕ್ಕೂ ರಾಷ್ಟ್ರ ವ್ಯವಸ್ಥೆ ಹೇಗಿರಬೇಕು ಇತ್ಯಾದಿ ವಿಷಯ ವೈವಿಧ್ಯಗಳಿಂದ ಕೂಡಿ ಮಹರ್ಷಿಗಳು ಬೆಳೆಸಿದ ಭಾರತವನ್ನು ಹೃತ್ಪೂರ್ವಕವಾಗಿ ಪ್ರೀತಿಸುವಂತೆ ಮಾಡುತ್ತದೆ.

ಮೂರನೆಯ ಭಾಗವು "ವಿದ್ಯೆ-ಕಲೆ" ಗಳನ್ನು ಕುರಿತಾದದ್ದು. ಕಾಲಕ್ರಮದಲ್ಲಿ ಭಾರತೀಯ ವಿದ್ಯೆಗಳ ಮೂಲದ ಅರಿವು ಮರೆಯಾಗಿ ವಿದ್ಯೆಗಳ ಪರಸ್ಪರ ಸಂಬಂಧದ ಬಗ್ಗೆ ಅಜ್ಞಾನದ ಮುಸುಕು ಕವಿದಿದೆ. ಹೀಗಿರುವಾಗ "ಓಂಕಾರವನ್ನೇ ಬೀಜವಾಗಿಟ್ಟುಕೊಳ್ಳಿ. ಎಲ್ಲ ಶಾಸ್ತ್ರಗಳೂ ಕೊಂಬೆ, ಕಾಂಡ, ಹೂ, ತೊಗಟೆ ಮುಂತಾದ ಸ್ಥಾನಗಳಲ್ಲಿವೆ. ತೊಗಟೆ ಇಲ್ಲದಿದ್ದರೂ ಹಣ್ಣು ಬರುವುದಿಲ್ಲ; ಎಲ್ಲ ಅಂಗಗಳೂ ಮುಖ್ಯವೇ. ಆದ್ದರಿಂದ ಯಾವ ವಿದ್ಯೆಯನ್ನೂ ಉಪೇಕ್ಷಿಸಬಾರದು."ಎಂಬ ಮಾತು ಅತ್ಯಂತ ಮಾರ್ಮಿಕವಾಗಿದೆ. ಭಾರತೀಯ ವಿದ್ಯಾಭ್ಯಾಸದ ಗುರಿ,  ಶಾಸ್ತ್ರಗಳ ಅವಶ್ಯಕತೆ, ಭಾರತೀಯ ವಿದ್ಯೆಗಳ ಭಾಷೆಯಾದ ಸಂಸ್ಕೃತದ ಔನ್ನತ್ಯ- ಮುಂತಾದ ವಿಷಯಗಳು ಒಂದು ಹೊಸ ನೋಟವನ್ನೇ ಕೊಡುತ್ತದೆ.

ನಾಲ್ಕನೆಯ ಭಾಗವು  "ಅವತಾರ " ಎಂಬ ಶೀರ್ಷಿಕೆಯನ್ನು ಹೊಂದಿದೆ. ಭಗವಂತನ ಅವತಾರಗಳ ಬಗ್ಗೆ ದಿಕ್ಕು ತಪ್ಪಿಸುವ ನಾನಾ ಚಿಂತನೆಗಳಿರುವ ಇಂದಿನ ಕಾಲಘಟ್ಟದಲ್ಲಿ ಅವತಾರವನ್ನು ಅರ್ಥ ಮಾಡಿಕೊಳ್ಳಲು ದಿಕ್ಸೂಚಿಯಾದ ವಿಚಾರಗಳ ಅವತಾರವಾಗಿದೆ ಇಲ್ಲಿ. ಇಷ್ಟೇ ಅಲ್ಲದೆ, ಭಗವತ್ಕಾರ್ಯಕ್ಕೆ ಬೇಕಾದ ಸಮರ್ಪಣೆ ಹೇಗಿರಬೇಕು? ಭಗವಂತನ  ಸಂಕಲ್ಪ, ಅನುಗ್ರಹಗಳು ಕೆಲಸ ಮಾಡುವ ಬಗೆ ಎಂತು? ಇತ್ಯಾದಿ ವಿಷಯಗಳು - ಇವುಗಳನ್ನು ದಯಪಾಲಿಸಿದ ಶ್ರೀ ಗುರುವಿನಲ್ಲಿ ತಲೆಬಾಗುವಂತೆ ಮಾಡುತ್ತದೆ.

ಬೆಲೆ: ರೂ. ೨೦೦/- (Hardbound )   
ನಮ್ಮ ವೆಬ್ ಸೈಟ್ (https://ayvm.in/publications) ನಲ್ಲಿ ಖರೀದಿಸಿದರೆ ಉಚಿತ ಮನೆಗೆ ವಿತರಣೆ (ವಿಶಾಲ ಭಾರತದಲ್ಲಿ ಮಾತ್ರ). 
mob: 8050124365 
whatsapp: 7411960041


To know more about Astanga Yoga Vijnana Mandiram (AYVM) and for ordering the books please visit our Website, Facebook and Twitter pages

More about AYVM

To know more about Astanga Yoga Vijnana Mandiram (AYVM) and for ordering the books please visit our Official Website, Facebook and Twitter pages: